🔥 Trending Now
#1TV9 Kannada
SRH ತಂಡದಿಂದ ಹೊರಗುಳಿಯುವ ಸುಳಿವು ನೀಡಿದ ಸ್ಟಾರ್ ಆಟಗಾರ!
130 days ago
TV9 Kannada
‘ಧುರಂಧರ್’ ಬಳಿಕ ಬುದ್ಧಿ ಕಲಿತ ಯಶ್ ರಾಜ್ ಫಿಲಮ್ಸ್, ಚಿತ್ರಕತೆ ಬದಲು
130 days ago
Public TV Kannada
ತಿಂಗಳಿಗೆ ಎರಡು ಬಾರಿ ಸಂಬಳ ನೀಡಿ: ಕಂಪನಿಗಳಿಗೆ ಶಾದಿ ಡಾಟ್ ಕಾಂ ಫೌಂಡರ್ ಅನುಪಮ್ ಮಿತ್ತಲ್ ಸಲಹೆ
130 days ago
TV9 Kannada
ವಿಶ್ವನಾಥನ್ ಆನಂದ್ ಅವರ 19 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಪ್ರಜ್ಞಾನಂದ
130 days ago
TV9 Kannada
ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?
130 days ago
TV9 Kannada
Video: ನೀರು ಕೇಳಿದ್ರೆ ಊಟ ಹಾಕಿದ್ರು; ಜಪಾನಿನ ವೃದ್ಧ ದಂಪತಿಯ ಒಳ್ಳೆತನ ಮೆಚ್ಚಿಕೊಂಡ ಭಾರತೀಯ
130 days ago
Prajavani
ಡಿ.ಕೆ.ಶಿವಕುಮಾರ್ ಪ್ರಮಾಣವಚನ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
130 days ago
‘ಪರಿಶ್ರಮದಿಂದ ಯಶಸ್ಸು ಸಾಧ್ಯ’
ಲಕ್ಷ್ಮೇಶ್ವರ: ‘ವಿದ್ಯಾರ್ಥಿಗಳು ಶ್ರದ್ಧೆ, ಪ್ರಾಮಾಣಿಕತೆ ಪರಿಶ್ರಮದಿಂದ ಯಾವುದೇ ಕೆಲಸದಲ್ಲಿ ಮುನ್ನುಗ್ಗಿದಾಗ ಯಶಸ್ಸು ಕಾಣಲು ಸಾಧ್ಯ’ ಎಂದು ಬೆಂಗಳೂರಿನ ಹರ್ಮನ್ ಮಿಲ್ಲರ್ ಕಂಪನಿಯ ಮಹೇಶ್ ಪಾಟೀಲ್ ಹೇಳಿದರು.

‘ಮದುವೆ: ಅನಗತ್ಯ ಹಣ ವ್ಯರ್ಥ ಮಾಡದಿರಿ’
ನರೇಗಲ್: ‘ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪಾದಾರ್ಪಣೆ ಆದರ್ಶ. ಇದು, ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಅಭಿವೃದ್ದಿಗೂ ಸಹಕಾರಿಯಾಗುತ್ತದೆ’ ಎಂದು ಹಾಲಕೆರೆ ಗ...

ವ್ಯಕ್ತಿಗಿಂತ ಸಮಾಜ ದೊಡ್ಡದು
ಗಜೇಂದ್ರಗಡ: ‘ವ್ಯಕ್ತಿಗಿಂತ ಸಮಾಜ ದೊಡ್ಡದು. ನಾವು ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಬಡವರಿಗೆ ನೆರವು ನೀಡುವುದರಿಂದ ದೇವರ ಕೃಪೆಗೆ ಪ್ರಾತ್ರರಾಗುತ್ತೇವೆ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ದೇವಾಂಗ ಸಮಾಜದ ಮುಖಂಡ ಡಾ.ಎಂ.ಎಸ್.ಕಡ್ಡಿ ಹೇಳಿದರು.

‘ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ’
ರೋಣ: ‘ಮುಖ್ಯಮಂತ್ರಿ ಶಾಸಕರಿಗೆ ನೀಡಿದ ವಿಶೇಷ ಅನುದಾನದಲ್ಲಿ ಬಹುಪಾಲನ್ನು ಮತಕ್ಷೇತ್ರದ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿನಯೋಗಿಸಲಾಗುತ್ತಿದ್ದು ಅಭಿವೃದ್ಧಿ ಕಾರ್ಯಗಳಿಗೆ ಜನ ಸಹಕಾರ ನೀಡಬೇಕು’ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಫಲಿತಾಂಶ
ಗದಗ: ನಗರದ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆ ತನ್ನ 33 ವರ್ಷಗಳ ಶೈಕ್ಷಣಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99.13 ದಾಖಲೆಯ ಫಲಿತಾಂಶ ದಾಖಲಿಸಿದೆ. ಶಿಕ್ಷಕ ವೃಂದದ ವಿಶೇಷ ಪ್ರಯತ್ನ ಹಾಗೂ ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯಿ...

ಕೃಷಿ ಇಲಾಖೆ ಯೋಜನೆ ಸದ್ಬಳಕೆ ಮಾಡಿಕೊಳ್ಳಿ
ಮುಳಗುಂದ: ‘ಕೃಷಿ ಇಲಾಖೆಯ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಉನ್ನತಿ ಹೊಂದಬೇಕು, ಅಂದಾಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ’ ಎಂದು ಸೊರಟೂರಿನ ಓಂಕಾರೇಶ್ವರ ಮಠದ ಫಕೀರೇಶ್ವರ ಸ್ವಾಮಿಜಿ ತಿಳಿಸಿದರು.

ಗ್ರಾಮದೇವತೆ ಜಾತ್ರಾ ಮಹೋತ್ಸವ ಸಂಭ್ರಮ
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ಭಾನುವಾರ ಗ್ರಾಮದೇವತೆ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ನಡೆಯಿತು.
ಸ್ಪೋಕನ್ ಇಂಗ್ಲಿಷ್ ತರಬೇತಿ ನಾಳೆಯಿಂದ
ನರಗುಂದ: ಪಟ್ಟಣದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಉಚಿತವಾಗಿ 10 ದಿನಗಳ ಸ್ಪೋಕನ್ ಇಂಗ್ಲಿಷ್ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಎಸ್‌ಎಸ್‌ಎಲ್‌ಸಿ: ಬ್ಯಾಡಗಿ ಫಲಿತಾಂಶ
ಬ್ಯಾಡಗಿ: ತಾಲ್ಲೂಕಿನ ಆಣೂರು ಗ್ರಾಮದ ಎಸ್‌ಬಿಎಚ್ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದಿದೆ.

ಶಂಕರಾಚಾರ್ಯರ ಜಯಂತಿ
ರಟ್ಟೀಹಳ್ಳಿ: ಪಟ್ಟಣದ ಕೋಟೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಕಂದಬೇಶ್ವರ ದೇವಸ್ಥಾನದಲ್ಲಿ ಏ.21ರಿಂದ ಆರಂಭವಾದ ಶಂಕರ ಭಗವತ್ಪಾದಾಚಾರ್ಯರ ಜಯಂತ್ಯುತ್ಸವವನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು.
ಕೃಷಿ ಪರಿಕರ ಮಾರಾಟಗಾರರ ಪ್ರತಿಭಟನೆ ಇಂದು
ಬ್ಯಾಡಗಿ: ಕಳಪೆ ಬೀಜ ಉತ್ಪಾದಕ ಕಂಪನಿಗಳ ಮೇಲೆ ಮೊಕದ್ದಮೆ ದಾಖಲಿಸದೆ ಮಾರಾಟಗಾರರ ಮೇಲೆ ಕ್ರಮ ಕೈಕೊಳ್ಳುತ್ತಿರುವ ನೀತಿ ವಿರೋಧಿಸಿದ ಕೃಷಿ ಪರಿಕರ ಮಾರಾಟಗಾರರು ಏ.27ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

‘ಪಕ್ಷದ ಗೆಲುವಿಗೆ ಕಾರ್ಯಕರ್ತರ ಶ್ರಮ ಮುಖ್ಯ’
ಶಿಗ್ಗಾವಿ: ‘ಪಕ್ಷದ ಗೆಲುವಿಗಾಗಿ ಕಾರ್ಯಕರ್ತರ ಪರಿಶ್ರಮ ಮುಖ್ಯ. ಪ್ರತಿಯೊಬ್ಬರೂ ಬಿಎಲ್‌ಎ, ಎಸ್‌ಐಆರ್ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಮತಗಳು ರದ್ದಾಗದಂತೆ ಜವಾಬ್ದಾರಿ ವಹಿಸಬೇಕು’ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.

ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ ವಿತರಿಸಿ
ಹಿರೇಕೆರೂರ: ‘ಮುಂಗಾರು ಹಂಗಾಮಿನಲ್ಲಿ ರೈತರ ಬಿತ್ತನೆ ಕಾರ್ಯಕ್ಕೆ ತೊಂದರೆಯಾಗದಂತೆ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸಬೇಕು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಬ್ಯಾಡಗಿ ಪಟ್ಟಣ: ಅಭಿವೃದ್ಧಿ ಕುಂಠಿತ
ಬ್ಯಾಡಗಿ: ಹಲವು ಕಡೆಗಳಲ್ಲಿ ಹಾಳಾದ ರಸ್ತೆಗಳು. ದೂಳಿನಿಂದ ಕಂಗೆಟ್ಟ ಜನರು. ಕೆಟ್ಟು ಮೂಲೆ ಸೇರಿದ ಸಂಚಾರ ಸಿಗ್ನಲ್‌ಗಳು. ವಿಸ್ತರಣೆಯಾಗದೇ ಇಕ್ಕಟ್ಟಾದ ರಸ್ತೆಗಳಲ್ಲಿ ಕಷ್ಟಕರವಾದ ಸಂಚಾರ. ಅಡ್ಡಾದಿಡ್ಡಿ ವಾಹನಗಳ ಸಂಚಾರದಿಂದ ಎದುರಾದ ದಟ್ಟಣೆ. ಹದಗೆಟ್ಟ ರಸ್ತೆಯಿಂದ ಮು...

‘ಎಲ್ಲರೂ ಎಸ್‌ಐಆರ್ ಮಾಹಿತಿ ಅರಿತುಕೊಳ್ಳಿ’
ಹಿರೇಕೆರೂರ: ‘ಬೂತ್ ಮಟ್ಟದ ಪ್ರತಿಯೊಬ್ಬ ಕಾರ್ಯಕರ್ತರು ಎಸ್‌ಐಆರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ನಿಮ್ಮ ಬೂತ್‌ನಲ್ಲಿ ಯಾವುದೇ ಮತದಾರರು ರದ್ದಾಗದಂತೆ ಜವಾಬ್ದಾರಿ ವಹಿಸಬೇಕು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ವರದಾ ನದಿಯಲ್ಲಿ ಚಿನ್ನಕ್ಕೆ ಹುಡುಕಾಟ
ಹಾವೇರಿ: ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ನದಿಯಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಸುತ್ತಿರುವ ಕಾರ್ಮಿಕರು, ನೀರನ್ನು ಸೂಸಿ ಅದರಲ್ಲಿ ಸಿಗುವ ಅಲ್ಪಸ್ವಲ್ಪ ಚಿನ್ನವನ್ನು ಮಾರಿ ಜೀವನ ಸಾಗಿಸುತ್ತಿದ್ದಾರೆ.

ಎಸ್.ಆರ್. ಬೊಮ್ಮಾಯಿ ಶಾಲೆ: ಉತ್ತಮ ಫಲಿತಾಂಶ
ಶಿಗ್ಗಾವಿ: ತಾಲ್ಲೂಕಿನ ಗೊಟಗೋಡಿ ಎಸ್.ಆರ್. ಬೊಮ್ಮಯಿ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಪ್ರರೀಕ್ಷೆಯಲ್ಲಿ ಶೇ 97.5 ಫಲಿತಾಂಶ ಪಡೆದಿದೆ.

ಚಿಕ್ಕೋಣತಿ ಸರ್ಕಾರಿ ಪ್ರೌಢಶಾಲೆ: ಸ್ಪಂದನಾ ಪ್ರಥಮ
ಹಿರೇಕೆರೂರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಚಿಕ್ಕೋಣತಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸ್ಪಂದನಾ ಚಿಗಮತ್ತೂರ (ಶೇ 93) ಪ್ರಥಮ, ದಾವಲಬಿ ಗುಮ್ಮನಾಳ (ಶೇ 89.44) ದ್ವಿತೀಯ ಸ್ಥಾನ ಪಡೆದಿದ್ದಾರೆ.
ನೇತ್ರ ತಪಾಸಣೆ ಶಿಬಿರ 29ರಂದು
ರಾಣೆಬೆನ್ನೂರು: ನಗರದ ಸ್ಟೇಷನ್ ರಸ್ತೆಯ ರೋಟರಿ ಪಬ್ಲಿಕ್ ಶಾಲೆ ಆವರಣದಲ್ಲಿ ರೋಟರಿ ಸಂಸ್ಥೆ, ದಾವಣಗೆರೆ ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಏ.29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ನೇತ್ರ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿ...

ಮಹರ್ಷಿ ವಾಲ್ಮೀಕಿ ಪ್ರತಿಮೆ ವಿರಾಜಮಾನ
ಹಾವೇರಿ: ಇಲ್ಲಿಯ ಹಳೇ ಪಿ.ಬಿ. ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಭಾನುವಾರ ಸಡಗರ ಸಂಭ್ರಮದಿಂದ ಅನಾವರಣಗೊಳಿಸಲಾಯಿತು. ಸುಸಜ್ಜಿತ ಕಟ್ಟೆಯ ಮೇಲೆ ಮಹರ್ಷಿ ವಾಲ್ಮೀಕಿ ಮೂರ್ತಿಯು ವಿರಾಜಮಾನವಾದ ಕ್ಷಣಗಳನ್ನು ಜಿಲ್ಲೆಯ ಹಲವು...